Tourism

Tourist Attractions

The follwing places of this District attract a lots of tourist all through the year

 

Papnash Shiva Temple at Bidar:

 

    As per the local traditional saying, the Shiva Linga idol in this temple is one of those installed by Shri RAM during the time of his journey back from Lanka. The location of the temple in a valley is mesmerising to the eyes. Every year at the time of Shivrathri festival lot of tourists visit this place. A natural spring flows into a pond in front of the temple which is called 'Papnasha'.

    ಪುರಾತನ ಶಿವಲಿಂಗ ಹೊಂದಿದ ಶಿವ ದೇವಾಲಯವಾಗಿದೆ. ಗಿರಿ ಝರಿಗಳಿಂದ ಕೂಡಿದ ರಮ್ಯ ತಾಣವಾದ ಪಾಪನಾಶ ಪ್ರವಾಸಿಗಳ ಕಣ್ಮನ ಸೆಳೆಯುವುದು. ಶ್ರೀರಾಮನು ಈ ಶಿವಲಿಂಗ ಸ್ಥಾಪಿಸಿದನೆಂಬ ಪ್ರತೀತಿ ಇದೆ. ಶಿವರಾತ್ರಿಯಲ್ಲಿ ವಿಶೇಷ ಜಾತ್ರೆ ನಡೆಯುವುದು. ಶ್ರಾವಣ ಮಾಸದಲ್ಲಿ ಭಕ್ತರು ಅಪಾರ ಸಂಖ್ಯೆಯಲ್ಲಿ ಆಗಮಿಸುತ್ತಾರೆ. ಇದು ಜಗತ್ ಪ್ರಸಿದ್ಧ ಧಾರ್ಮಿಕ ಸಾಂಸ್ಕೃತಿಕ ಕೇಂದ್ರವಾಗಿದೆ.

Narshimha Jhira Water Cave Temple

 

     At this place the Powerful diety as per the belief here is situated in cave of nealy 300 meters. One has to wade through water upto chest height to have darshan of the diety. It will be thrilling experience with bats and owls sitting on the roof toop of cave but they will not do any harm to the devotees. In the year 1999 with efforts of an young IAS Officer Mr. M Maheswar Rao who was working as Assistant Commissioner and was incharge of this temple comittee got the cave Air conditioned and Electrified.

      ಬೀದರಿನ ಪೂರ್ವ ದಿಕ್ಕಿಗೆ ಮಂಗಲಪೇಟನಿಂದ ಹಾದು ಹೋಗುವ ದಾರಿಯಲ್ಲಿರುವ ಕ್ಷೇತ್ರವೇ ನರಸಿಂಹ ಝರಾ. ಇದೊಂದು ಗುಹಾಂತರ ದೇವಾಲಯವಾಗಿದೆ. ಗುಹೆಯ ಒಳಗಿನಿಂದ ನೀರು ಹರಿಯುತ್ತದೆ. ನೀರು ೧೨ ತಿಂಗಳುಗಳ ಕಾಲ ಹರಿಯುತ್ತಿರುತ್ತಿವೆ. ಝರಿಯ ನೀರು ಮುಂದೆ ಮಲ್ಕಾಪೂರ ಕರ ಸರುತ್ತ ಗುಹೆಯಲ್ಲಿ ೯೦ ಮೀಟರ್ ದೂರದಷ್ಟು ಸೊಂಟದವರೆಗಿನ ನೀರಿನಲ್ಲಿ ನಡೆದುಕೊಂಡು ಹೋದಾಗ ಒಳಗಡೆ ನರಸಿಂಹ ದೇವರ ಮೂರ್ತಿಯನ್ನು ಕಾಣಬಹುದಾಗಿದೆ. ಇತ್ತೀಚೆಗೆ ಸರ್ಕಾರ ಜೀರ್ಣೋದ್ಧಾರ ಕಾರ್ಯವನ್ನು ಕೈಗೊಂಡಿದೆ. ನಿಸರ್ಗದ ಸುಂದರ ತಾಣವಾಗಿರುವ ಈ ಪ್ರದೇಶ ಪ್ರವಾಸಿಗರ ಗಮನ ಸೆಳೆಯುವ ಧಾರ್ಮಿಕ ಕೇಂದ್ರವಾಗಿದೆ. ಭಕ್ತ ಪ್ರಲ್ಹಾದನ ರಕ್ಷಣೆಗಾಗಿ ಅವತಾರ ಹೊಂದಿದ ಉಗ್ರ ನರಸಿಂಹನು ಶಾಂತವಾದ ಸ್ಥಳವೆಂದು ಹೇಳಲಾಗುತ್ತದೆ. ನರಸಿಂಹನು ದುಷ್ಟರ ಸಂಹಾರ, ಶಿಷ್ಟರ ರಕ್ಷಣೆ ಮಾಡುವ ದೇವ ಎನ್ನುವ ಪ್ರತೀತಿಯೂ ಇದೆ.

 

 Chidambara Aashram, Shri Siddharudha Math, (Gumpa) Bidar  

Chidambara Aashram, Shri Siddharudha Math, (Gumpa) is built in the year 1986 by Shri Shivkumar Swamiji. There are 12 Jyothirlingas on both the sides Shri Siddharudha statue. This is temple located at Manahalli Road, Bidar. This is also known as Gumpa. During last three decades Shri Siddharudha Math (Gumpa) has became the center of Religious, Educational and Social activities. Shri Shivkumar Swamiji delivers Pravachana in the month of July (Shravana masa), Navarathri, & Every Sunday Evening. Lots of devoties has the spiritual thrust in them. A visitor/devotees who visits holy places in bidar, if any devotee not visit this temple his yatra becomes incomplete. Every year lots of devotees from all parts of the India visits to celebrate Sadguru Siddharudha & Shivakumar Mahaswamiji Jayanti. This is Celebrated particularly in the month of November.

Guru Nank Jhira, Bidar

     Gurudwara Bidar is one of Holiest Place for Sikhs. Every Year this place attracts lots of tourists from all parts of the country particularly during the months of November and March. Legend has it that Saint Guru Nanak visited the palce while the land was in the grip of a famine The Guru performed a miracle at the request of the locals and a spring of water from the laterite rock mountain burst out. Till this day crystal clear water flows from the laterite trap.The belief is that drinking of this water cures many ailments.

   ಇದು ಸಿಖ್‌ಧರ್ಮಿಯರ ಪ್ರವಿತ್ರ ಸ್ಥಳಗಳಲ್ಲಿ ಒಂದಾಗಿದೆ. ದೇಶದ ನಾನಾ ಕಡೆಗಳಿಂದ ಪ್ರವಾಸಿಗರು ಇಲ್ಲಿಗೆ ಬರುತ್ತಾರೆ. ಗುರುನಾನಕರು ಪ್ರವಾಸ ಕಾಲಕ್ಕೆ ಇಲ್ಲಿಗೆ ಬಂದು ತಂಗಿರುವ ಕಥೆ, ಇಲ್ಲಿಯ ಜನರಿಗೆ ನೀರು ಒದಗಿಸಿದ ಕಥೆಗಳು ಆವರ ಸುತ್ತ ಹೆಣೆದುಕೊಂಡಿವೆ. ಭವ್ಯವಾದ ಪ್ರಾರ್ಥನಾ ಮಂದಿರ, ವಿಶಾಲವಾದ ಸಭಾಂಗಣ, ಊಟದ ವ್ಯವಸ್ಥೆಗಾಗಿರುವ ಲಂಗರ್ ಹೌಸ್, ಯಾತ್ರಿಗಳ ಸ್ನಾನಕ್ಕಿರುವ ಸುಂದರವಾದ ಕೊಳ, ತಿಳಿ ನೀರಿನ ಅಮೃತ ಕುಂಡ ಮುಂತಾದ ಕಟ್ಟಡಗಳಿವೆ. ಇಲ್ಲಿನ ಕಟ್ಟಡ ಭವ್ಯವಾಗಿದ್ದು ಪಕ್ಕದಲ್ಲಿ ಬಹುಉದ್ದೇಶಿಯ ಆಸ್ಪತ್ರೆ ಇದೆ. ಸಿಖ್ಪರಂಪರೆಯನ್ನು ಕಟ್ಟಿಕೊಡುವ ಚಿತ್ರಪಟಗಳ, ಹಲವಾರು ಮಾಹಿತಿ ಹೊಂದಿರುವ ಮ್ಯೂಸಿಯಂ ಗುರುದ್ವಾರದಲ್ಲಿದೆ.

 Dev Dev Vana (Botanical Garden): 

An Eco Tourism center 6 KM away from Bidar town on Bidar - Hyderbad Highway. With more than 200 medicinal plants, this vana is believed to be something of a unconventional temple of plants.

ದೇವ ದೇವ ವನ: ಇದೊಂದು ಅರಣ್ಯ ಪ್ರದೇಶದಲ್ಲಿ ಹೊಸದಾಗಿ ನಿರ್ಮಿಸಲಾದ ಗಾರ್ಡನ್ ಇದಾಗಿದೆ. ಬೀದರನಿಂದ ಜಹಿರಾಬಾದ ಕಡೆಗೆ ಹೋಗುವ ದಾರಿಯಲ್ಲಿ ಇದು ಸ್ಥಿತವಾಗಿದೆ. ಅರಣ್ಯ ಇಲಾಖೆಯು ಇದರ ಜವಾಬ್ದಾರಿ ವಹಿಸಿಕೊಂಡಿದೆ. ವಿವಿಧ ಔಷಧಿ ಸಸ್ಯಗಳನ್ನು ಈ ಗಾರ್ಡನ್‌ನಲ್ಲಿ ಕಾಣಬಹುದಾಗಿದೆ. ಇಲ್ಲಿಯ ಸಸ್ಯರಾಶಿ ಹಾಗೂ ಆಹ್ಲಾದಕರ ವಾತಾವರಣ ಪ್ರವಾಸಿಗರ ಮನ ತಣಿಸುತ್ತದೆ.

 


 

ಅಗ್ರಹಾರ:ಇದು ಕೋಟೆಯ ಹತ್ತಿರ ಪೂರ್ವ ದಿಕ್ಕಿನಲ್ಲಿದೆ. ಅಗ್ರಹಾರ ದೇವಸ್ಥಾನದಲ್ಲಿ ವಿಷ್ಣುದೇವರು ಹಾವಿನ ಹೆಡೆಯ ಮೇಲೆ ಮಲಗಿರುವ ಸುಂದರ ೫ ಅಡಿಯ ಮೂರ್ತಿ ಇದೆ. ಈ ಮೂರ್ತಿಯು ಬಹಳ ಪ್ರಾಚೀನವಾಗಿದೆ. ಬಹುಶ: ಇದು ಸಹ ರಾಷ್ಟ್ರಕೂಟರ ಕಾಲದ್ದಾಗಿರಬೇಕೆಂದು ಇತಿಹಾಸಕಾರರ ಅನಿಸಿಕೆಯಾಗಿದೆ. ಇಂತಹ ಸುಂದರ ಅಪರೂಪ ಪ್ರಾಚೀನ ಮೂರ್ತಿಯ ದೇವಸ್ಥಾನ ಇದಾಗಿದೆ. ಪ್ರಾಚೀನ ಕಾಲದಲ್ಲಿ ಅಗ್ರಹಾರಗಳು ವೇದ ಅಧ್ಯಯನಗಳ ಕೇಂದ್ರಗಳಾಗಿದ್ದವು. ಅರಸರು ಬ್ರಾಹ್ಮಣರಿಗೆ ದಾನದ ರೂಪದಲ್ಲಿ ಅಗ್ರಹಾರಗಳನ್ನು ನೀಡುತ್ತಿದ್ದರು.

afd

ಅಬುಲ್ ಫಯಾಜ್ ದರ್ಗಾ: ಈ ದರ್ಗಾ ಬೀದರಿನ ಹಳೆಯನಗರದ ಹೊರವಲಯದಲ್ಲಿದೆ. ಬಸ್ ನಿಲ್ದಾಣದಿಂದ ೬ ಕಿ.ಮೀ. ಆಗುತ್ತದೆ. ವಿಶಾಲವಾದ ಸ್ಥಳ ಹಾಗೂ ಸುಂದರವಾದ ಎರಡು ಗುಮ್ಮಟಗಳಿಂದ ಕೂಡಿದ ಭವ್ಯ ಕಟ್ಟಡವಾಗಿದೆ. ಬಹಮನಿ ಅರಸರ ಕಾಲದ ಈ ಕಟ್ಟಡವು ತನ್ನದೇ ಆದ ವೈಶಿಷ್ಟಯ ಹೊಂದಿದೆ. ಅಬುಲ್ ಫಯಾಜ್ ಅವರು ಸೂಫಿ ಸಂತ ಗುಲಬರ್ಗಾದ ಖ್ವಾಜಾ ಬಂದೆ ನವಾಜ ಅವರ ಮೊಮ್ಮಗ. ಬಹಮನಿ ಅರಸರ ಆಸ್ಥಾನದಲ್ಲಿ ಅತ್ಯಂತ ಗೌರವಯುತವಾದ ಸ್ಥಾನ ಪಡೆದಿದ್ದ ಅಬುಲ್ ಫಯಾಜ್ ಅವರ ಸಮಾಧಿ ಇಲ್ಲಿದೆ. ಸೂಫಿ ಪರಂಪರೆಗೆ ಸೇರಿದ ಅಬುಲ್ ಫಯಾಜ್‌ರ ನೆನಪಿನಲ್ಲಿ ಪ್ರತಿ ವರ್ಷ ಉರುಸ್ ನಡೆಸಲಾಗುತ್ತದೆ. ಆಗ ಕವ್ವಾಲಿ ಗಾಯನ ಕೂಡ ಇರುತ್ತದೆ.

ಮಂಗಲ ಪೇಟ ಚರ್ಚ್: ರೆವರೆಂಡ ಜಾನ್ ವೆಸ್ಲಿ ಇವರು ಮೆಥೋಡಿಸ್ಟ್ ಸಭೆಯ ಸಂಸ್ಥಾಪಕರು. ೧೯೦೧ ರಲ್ಲಿ ಪ್ರಾರಂಭವಾಗಿದೆ. ಈ ಚರ್ಚ್ ಬ್ರೀಟೀಷರ ಕಾಲದಿದ್ದು. ಬೀದರಿನ ಹಳೆ ನಗರದ ಮಂಗಲಪೇಟ ಬಡಾವಣೆಯಲ್ಲಿದೆ. ಭವ್ಯವಾದ ಕಟ್ಟಡ ಆಕರ್ಷಣೀಯವಾಗಿದೆ. ಪ್ರತಿ ರವಿವಾರ ಇಲ್ಲಿ ಧಾರ್ಮಿಕ ಪ್ರಾರ್ಥನೆ ನಡೆಯುತ್ತದೆ. ಕ್ರೈಸ್ತ್ ಧರ್ಮಿಯರ ಯೇಸು ಸ್ವಾಮಿಯ ಆರಾಧನೆ ಮತ್ತು ಆತನ ಸಂದೇಶಗಳನ್ನು ಮನನ ಮಾಡಿಕೊಳ್ಳುವ ಕೇಂದ್ರವಾಗಿದೆ. ೨೫ ಡಿಸೆಂಬರದಂದು ಇಲ್ಲಿ ಜಾತ್ರೆ ಸೇರುತ್ತದೆ. ಬೀದರನಲ್ಲಿ ಮೊಟ್ಟ ಮೊದಲ ಕನ್ನಡ ಶಾಲೆ ಆರಂಭಿಸಿದ ಹಿರಿಮೆ ಕ್ರೈಸ್ತ ಮಿಶನರಿಗಳಿಗೆ ಸಲ್ಲುತ್ತದೆ. ನಾರ್ಮಾ ಫ್ರೆಡ್ರಿಕ್ ಎಂಬ ಕ್ರಿಶ್ಚಿಯನ್ ಮಹಿಳೆಯು ಕನ್ನಡ ಶಾಲೆ ಆರಂಭಿಸಿದರು. ಆಗ ಆರಂಭವಾದ ಶಾಲೆಯು ಸದ್ಯ ಎನ್.ಎಫ್.ಎಚ್.ಎಸ್. ಎಂಬ ಹೆಸರಿನಿಂದ ಪರಿಚಿತವಾಗಿದೆ.

 

ವಾಯು ನೆಲೆ: ಭಾರತೀಯ ವಾಯು ಸೇನೆಯ ಪ್ರಮುಖ ವೈಮಾನಿಕ ಕೇಂದ್ರವು ಬೀದರನಲ್ಲಿದೆ. ವಾಯುಪಡೆಯ ತರಬೇತಿ ಕೇಂದ್ರ ಇರುವ ಬೀದರ್‌ನ ಸೂರ್ಯಕಿರಣ ಏರೋಬ್ಯಾಟಿಕ್ ತಂಡವು ಬಾನಂಗಣದಲ್ಲಿ ಸಾಹಸ ಪ್ರದರ್ಶನ ನೀಡುವ ಜಗತ್ತಿನ ಅತ್ಯುತ್ತಮ ತಂಡಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಒಂಬತ್ತು ವಿಮನಗಳನ್ನು ಬಳಸಿ ಆಕಾಶದಲ್ಲಿ ಬಣ್ಣ ಬಣ್ಣದ ಚಿತ್ತಾರ ಬಿಡಿಸುವ ಜಗತ್ತಿನ ಮೂರು ತಂಡಗಳ ಪೈಕಿ ಭಾರತದ ವಾಯುಪಡೆಯೂ ಒಂದು. ಅದರ ಮೂಲ ನೆಲೆ ಇರುವುದು ಬೀದರ್‌ನಲ್ಲಿ. ಅತ್ಯಾಧುನಿಕ ಯುದ್ಧ ವಿಮಾನ ‘ಹಾಕ್ ಎಂ.ಕೆ. ೧೩೨’ ಯುದ್ಧ ವಿಮನ ಹಾರಾಟದ ತರಬೇತಿ ನೀಡುವ ದೇಶದ ಏಕೈಕ ಕೇಂದ್ರ ಬೀದರ್‌ನಲ್ಲಿದೆ.

 

ಬಿದರಿ ಕಲೆ: ಬೀದರ ಬಿದರಿ ಕಲೆಗಾಗಿ ಜಗತ್ಪ್ರಸಿದ್ಧವಾಗಿದೆ. ಸತು (Zinc) ತಾಮ್ರ (Copper) ಹಾಗೂ ಸೀಸ್ (Lead) ಈ ಧಾತುಗಳನ್ನು ೮೫:೧೨:೩ ಪ್ರಮಾಣದಲ್ಲಿ ಬೆರೆಸಿ ಕರಗಿಸಿ ತಯಾರಿಸಿದ ಆಕೃತಿಗಳ ಮೇಲೆ ರೇಖೆಗಳನ್ನು ಕೊರೆದು ಅದರಲ್ಲಿ ಬೆಳ್ಳಿ ತಂತಿ/ಹಾಳೆ ಕೂಡಿಸಲಾಗುತ್ತದೆ. ಬೀದರ ಕೋಟೆಯಲ್ಲಿನ ಬಾರೂದ್ ಖಾನಾದಲ್ಲಿ ದೊರಕುವ ಮಣ್ಣಿನ ದ್ರಾವಣದಲ್ಲಿ ಹಾಗೆ ತಯಾರಿಸಿದ ಕಲಾಕೃತಿಗಳನ್ನು ಅದ್ದಿದಾಗ ರಾಸಾಯನಿಕ ಪ್ರಕ್ರಿಯೆ ಏರ್ಪಡುತ್ತದೆ. ಬೆಳ್ಳಿ ಕೂಡಿಸಿದ ಭಾಗವನ್ನು ಹೊರತುಪಡಿಸಿ ಉಳಿದೆಲ್ಲ ಭಾಗ ಕಪ್ಪು ವರ್ಣಕ್ಕೆ ತಿರುಗುತ್ತದೆ. ಹೂದಾನಿ, ಆಭರಣ ಪೆಟ್ಟಿಗೆ, ಬಳೆಗಳು ಮುಂತಾದವುಗಳನ್ನು ತಯಾರಿಸುತ್ತಾರೆ. ಬಿದರಿ ಕಲಾಕೃತಿಗಳಿಗೆ ದೇಶ ವಿದೇಶಗಳಲ್ಲಿ ಬೇಡಿಕೆ ಹೆಚ್ಚುತ್ತಿದೆ. ಬೀದರ ಸಮೀಪದ ಚಿದ್ರಿ ಗ್ರಾಮದಲ್ಲಿ ಎರಕ ಹೊಯ್ದು ವಿವಿಧ ಆಕೃತಿಗಳನ್ನು ತಯಾರಿಸುವ ಕೆಲಸ ಜರುಗುತ್ತದೆ. ಇದಕ್ಕೆ ಚಿದ್ರಿ ಕಲೆ ಕೂಡ ಅನ್ನುತಾರೆ.

ಕಮಠಾಣಾ ಜೈನ ಮಂದಿರ:ರಟ್ಟ ಅರಸು ಮನೆತನದ ಕಾಲದ ಭಗವಾನ ಪಾರ್ಶ್ಚನಾಥ (೨೩ನೇ ತೀರ್ಥಂಕರ) ತೀರ್ಥಂಕರರ ಸುಂದರ ಬಸದಿ ಇದೆ. ಬಸದಿಯು ವಿಶಾಲವಾದ ಪ್ರಾಂಗಣ ಹೊಂದಿದೆ. ಸುತ್ತಲು ಮಾವಿನ ಗಿಡಗಳಿವೆ. ಪ್ರತಿ ವರ್ಷ ಮಾಘ ಪಂಚಮಿಯಿಂದ ಸಪ್ತಮಿವರೆಗೆ ಜಾತ್ರೆ ನಡೆಯುತ್ತದೆ. ಆಂಧ್ರ ಪ್ರದೇಶ, ಮಹಾರಾಷ್ಟ್ರದಿಂದ ಸಾವಿರಾರು ಜಿನಭಕ್ತರು ಇಲ್ಲಿಗೆ ಆಗಮಿಸುತ್ತಾರೆ. ಜೈನಮುನಿಗಳು ಆಗಾಗ ಬಂದು ಪ್ರವಚನ ಕಾರ್ಯಕ್ರಮ ನೀಡುತ್ತಾರೆ. ಕಮಠಾಣಾ ಗ್ರಾಮವು ಅತೀ ಪ್ರಾಚೀನ ಊರು ಊರಿನ ಸುತ್ತಲು ಜೋಡು ಕಂದಕಗಳಿವೆ. ದಿಗಂಬರ ಪಂಥದ ಜೀನಾಲಯಗಳು, ಅನೇಕ ಸೇಡಿ ಬಾವಿಗಳಿವೆ. ಭೂಮಿ ಆಳದಲ್ಲಿ ಸೇಡಿ ದೊರಕುತ್ತದೆ. ಪಕ್ಕದಲ್ಲಿ ಇರುವ ಸಿರ್ಸಿ ಗ್ರಾಮದಲ್ಲಿ ಭೂಮಿಯ ಒಳ ಪದರುಗಳಲ್ಲಿ ಜಾಜಾ (ಕೆಂಪು ಮಣ್ಣು) ದೊರೆಯುತ್ತದೆ.

 

 

 

 

 

This Page is Maintained by Sri Laxmikanth Mis Section CMC Bidar +91-8482-240432

 

No. Of Visitors :
Last Updated   : 16/05/2013 Release History
Release 2.0.0, Powered By Karnataka Municipal Data Society & maintained by Bidar TMC
This website can best viewed with the resolution 1024 * 768 using Internet Explorer 7.0 or above.
Valid CSS!